(ಏಪ್ರಿಲ್, ೨, ೧೮೯೮-ಜೂನ್, ೨೩, ೧೯೯೦), ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಒಬ್ಬ ಇಂಗ್ಲಿಷ್ ಕವಿ, ನಟ, ಮತ್ತು ಆಂಧ್ರಪ್ರದೇಶದಿಂದ ವಿಜಯವಾಡ ಪ್ರದೇಶದಿಂದ ಆರಿಸಿ ಬಂದ 'ಪ್ರಥಮ ಲೋಕಸಭೆಯ ಸದಸ್ಯ'. ಅಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ, ಸುಪ್ರಸಿದ್ಧ ಕವಯಿತ್ರಿ, 'ಗಾನ ಕೋಗಿಲೆ' ಎಂದು ಹೆಸರಾಗಿದ್ದ, ಸರೋಜಿನಿ ನಾಯಿಡುರವರ ತಮ್ಮ. == ಜನನ ಮತ್ತು ಬಾಲ್ಯ == ಹರೀಂದ್ರನಾಥ್ ಚಟ್ಟೋಪಾಧ್ಯಾಯ,ವಿಜ್ಞಾನಿ-ತತ್ವಜ್ಞಾನಿ, 'ಅಘೋರನಾಥ್ ಚಟ್ಟೋಪಾಧ್ಯಾಯ' ರವರ ಮಗ. ತಾಯಿ,ಕವಯಿತ್ರಿ, 'ಬರದ ಸುಂದರಿ ದೇವಿ', ತಮ್ಮ ಕವಿತೆ, ’ನೂನ್’ ಮತ್ತು ಶೇಪರ್ ಶೇಪ್ಡ್,( ) ಹರೀಂದ್ರನಾಥ ಚಟ್ಟೋಪಾಧ್ಯಾಯ ರವರ ಇತರ ಹವ್ಯಾಸಗಳು, ನಾಟಕ ರಂಗ, ಮತ್ತು ಸಿನೆಮ ; ಅವರಿಗೆ ರಾಜಕೀಯದಲ್ಲಿ ತೀವ್ರ ಆಸಕ್ತಿಯಿತ್ತು. ೧೯೭೩ ರಲ್ಲಿ ಪದ್ಮ ಭೂಷಣ್ ಪ್ರಶಸ್ತಿ ದೊರೆಯಿತು. ಸಾಮಾಜಿಕ ಕಾರ್ಯಕರ್ತೆ, ಮಹಿಳೆಯ ಪರ ಹೋರಾಡುವ ವ್ಯಕ್ತಿ,ಕಮಲಾದೇವಿ ಚಟ್ಟೋಪಾದ್ಯಾಯ ರನ್ನು ಲಗ್ನವಾದರು. ಆಕೆ, ' ' ', ' ', ' ' ',ನಂತಹ ಸಂಸ್ಥೆಗಳನ್ನು ಸ್ಥಾಪಿಸಿದರು. ೧೮೦೦ ರಲ್ಲಿ ಬ್ರಿಟನ್ ನಲ್ಲಿ ಶುರುವಾದ 'ಔದ್ಯೋಗಿಕ ಕ್ರಾಂತಿ' ಯಿಂದ ವಂಚಿತವಾದ ಭಾರತದ ಗೃಹ-ಕೈಗಾರಿಕೆಯನ್ನು ಖಂಡಿಸಿ, ( ) ಗೃಹೋದ್ಯೋಗಕ್ಕೆ ಮನ್ನಣೆದೊರೆಯಲು ಸಹಾಯಮಾಡಿದರು. ಈ ದಂಪತಿಗಳ ಮಗನೇ, 'ರಾಮಕೃಷ್ಣ ಚಟ್ಟೋಪಾಧ್ಯಾಯ' ; ಬೆಂಗಳೂರಿನಲ್ಲಿದ್ದಾರೆ. == ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಮತ್ತು ಕಮಲಾದೇವಿ == ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಕಮಲಾದೇವಿಯರು, ಕೆಲವು ಭಿನ್ನಾಭಿಪ್ರಾಯಗಳಿಗಾಗಿ ಬೇರೆಯಾದರು. ಭಾರತದಲ್ಲಿ ನ್ಯಾಯಾಲಯದಲ್ಲಿ ತೀರ್ಮಾನವಾಗಿ ಬೇರೆಯಾದ ಮೊಟ್ಟಮೊದಲ ಗಂಡ-ಹೆಂಡರ ಪ್ರಕರಣವೆಂದು ದಾಖಲಿಸಲ್ಪಟ್ಟಿದೆ. ಮೊಮ್ಮಗ, 'ನೀಲಕಂಠ ಚಟ್ಟೋಪಾದ್ಯಾಯ' ಸಿನಿಮಾ ನಿರ್ಮಾಪಕ, ಮತ್ತು ಸಂಗೀತಗಾರ, ಬೆಂಗಳೂರಿನಲ್ಲಿ ನೆಲಸಿದ್ದಾರೆ. ಮೊಮ್ಮಗಳು, 'ನಿನಾ', ಅಮೆರಿಕದ ವಾಶಿಂಗ್ಟನ್ ರಾಜ್ಯದಲ್ಲಿನ ಸಿಯಾಟಲ್ ನಗರದಲ್ಲಿದ್ದಾಳೆ. ತಮ್ಮ ಅಜ್ಜನವರ ದಿನಚರಿಯನ್ನು ಸ್ಮರಿಸಿಕೊಳ್ಳುತ್ತಾರೆ. ಬೊಂಬಾಯಿನಲ್ಲಿದ್ದಾಗ, ತಮ್ಮ ೭೫ ನೆಯ ವಯಸ್ಸಿನಲ್ಲೂ ಏಳುತ್ತಿದ್ದದ್ದು, ಬೆಳಗಿನ ಜಾವ ೪ ಗಂಟೆಗೆ, 'ಬಾಂದ್ರ'ದಿಂದ 'ಮೆರಿನ್ ಡ್ರೈವ್' ವರೆಗೆ ನಡೆದು ಬಂದು, ಮೊಮ್ಮಕ್ಕಳಿಗೆ ಚಾಕೊಲೇಟ್ ಬಾಕ್ಸ್ ತರುತ್ತಿದ್ದರು.ತಿಂಡಿಯ ಹೊತ್ತಿಗೆ ಮನೆಗೆ ವಾಪಸ್ ಬರುತ್ತಿದ್ದರು. == ಒಬ್ಬ ವಿಚಿತ್ರವ್ಯಕ್ತಿಯಾಗಿ == ಸಿನೆಮಾ ನಿರ್ಮಾಪಕ, ಲಕ್ಷ್ಮಣ್ ಹೇಳುವಂತೆ," , ಯಾವಾಗಲೂ ನಮಗೆ ಪ್ರಿಯರು, ಮತ್ತು ಒಬ್ಬ ವಿಚಿತ್ರವ್ಯಕ್ತಿಯಾಗಿದ್ದರು" ನಿನಾ ಹೇಳಿದರು, " ಇಂಥಹ ವ್ಯಕ್ತಿಗಳ, ಕೆಲವು ಮಾನವೀಯ ಗುಣಗಳನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು, ಮರೆಯಬಾರದು". == ರೈಲ್ ಗಾಡಿಯ ಪ್ರೀತಿಯ ಗೀತೆ == ಆಕಾಶವಾಣಿಯಲ್ಲಿ, ಹಲವಾರು ಬಾರಿ ತಮ್ಮ ಕವಿತೆ, ರೇಲ್ ಗಾಡಿಯನ್ನು ಹಾಡುತ್ತಿದ್ದರು, ಅದನ್ನು ನಟ, 'ಅಶೋಕ್ ಕುಮಾರ್' ತಮ್ಮ 'ಆಶೀರ್ವಾದ್' ಚಿತ್ರದಲ್ಲಿನ 'ಕಿರ್ದಾರ್' ನಲ್ಲಿ, ಚೆನ್ನಾಗಿ ಹಾಡಿದ್ದಾರ‍ೆ. == ರಾಜಕೀಯದಲ್ಲಿ ಪರಮಾಸಕ್ತರು == ೧೯೫೧ ರಲ್ಲಿ ನಡೆದ ಲೋಕ್ ಸಭಾ ಚುನಾವಣೆಯಲ್ಲಿ, ಆಗಿನ ಮಡ್ರಾಸ್ ರಾಜ್ಯದ 'ವಿಜಯವಾಡದ ಚುನಾವಣಾ ಕ್ಶೇತ್ರ'ದಿಂದ ಸ್ವತಂತ್ರ ಅಭ್ಯರ್ತಿಯಾಗಿ ಸೆಣೆಸಿ, ವಿಜಯಿಯಾದರು. ಅವರಿಗೆ 'ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ' ನೆರವಿತ್ತು. ಲೋಕಸಭೆಯ ಪ್ರಪ್ರಥಮ ಸದಸ್ಯರಾಗಿದ್ದರು, ಏಪ್ರಿಲ್ ೧೪, ೧೯೫೨ ರಿಂದ ಏಪ್ರಿಲ್,೪, ೧೯೫೭ ವರೆಗೆ ೧೯೯೦ ಮರಣಿಸಿದರು. ೧೯೭೨ ನಲ್ಲಿ ನಿರ್ಮಿಸಿದ, 'ಬಾವರ್ಚಿ' ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ.